Home
This website has started to motivate beginners interested in online writing. The primary end users can find easy way to write and communicate. It is evident blogging media can fulfill their desire and most of them heard about the same also. But even then the first barrier is usage of regional language on online till now become unknown to so many people of our region. Keeping in view of the above fact primary end users can get help in all the way takes first importance.
Continued…>>>
ವಿಶೇಷ ಬರಹಗಳು:-
ಜೀವ ಸಮುದ್ರ(ಕಿರು ಕಾದಂಬರಿ)
ಮಹೇಶ ಮುಂಬೈಗೆ ಬಂದವನು ಜುಹೂ ಬೀಚಿಗೆ ಹೋಗಿ ಅಲ್ಲೆ ಕುಳಿತನೆಂದರೆ ಬಹಳ ಹೊತ್ತಿನವರೆಗೆ ಮೇಲೇಳುವುದೇ ಇಲ್ಲ. ದಡಕ್ಕೆ ಅಪ್ಪಳಿಸುವ ನೀಲ ಸಮುದ್ರದ ಅಲೆಗಳನ್ನು ನಿಟ್ಟಿಸುತ್ತಿರುತ್ತಾನೆ. ಹಾಗೇ ದೂರ ದಿಗಂತದತ್ತ ಕಣ್ಣಂಚಿನವರೆಗೂ ಎಟುಕಿದಂತೆ ಗೋಚರಿಸುವ ಕ್ಷಿತಿಜದಾಚೆಗೆ ಜೀವಿತದ ಏನೆಲ್ಲ ನಿಗೂಢ ರಹಸ್ಯಗಳನ್ನು ಬೇಧಿಸುವ ತವಕವೋ, ಅದೇನು ಜನ ಜೀವನದ ಚಿಂತನಯೋ ಏನೊಂದೂ ಹೇಳಲಾಗುವುದೇ ಇಲ್ಲ.
ಆದರೇನು ! ಆ ಸಮುದ್ರದ ಗಂಭೀರ ಅಲೆಗಳು, ಒಮ್ಮೆ ಜೀವನದ ಕಷ್ಟಕೋಟಲೆಗಳನ್ನು ಏಳುಬೀಳುಗಳಲ್ಲಿ ಪ್ರತಿನಿಧಿಸುವಂತೆ ಕಂಡರೂ, ಮತ್ತೊಮ್ಮೆ ತನ್ನೊಳಗೇ ಸೆಳೆದುಕೊಳ್ಳುವ ಒಲವಿನ ಮಹಾಪೂರದಂತೆ ಜೀವಸೆಲೆಯುಕ್ಕಿಸುವಾಗ ಮನದಾಳದಿಂದ ಹೊಮ್ಮಿದ ನಗೆ ತುಟಿಯಲ್ಲಿ ಮುಗುಳಾಗಿ ತೊನೆಯುತ್ತದೆಯಲ್ಲ… ಆಗ ಅವನು ಅವನಾಗಿ ಇಹ ಲೋಕದಲ್ಲಿ ಇರುವುದೇ ಇಲ್ಲ. ಅದಕ್ಕೆಂದೇ ಮುಂಬೈಗೆ ಬಂದನೆಂದರೆ, ಅದೆಂಥದೋ ಚುಂಬಕ ಶಕ್ತಿಗೆ ಒಳಗಾದವನಂತೆ ಈ ಕಡಲ ಕಿನಾರೆಗೆ ಬಂದೇ ತೀರುತ್ತಾನೆ. ಈ ಸಮುದ್ರದ ದೃಶ್ಯವನ್ನು ಅನೇಕ ಬಾರಿ ತನ್ನ ಕಲೆಯ ಕೈ ಚಳಕದಲ್ಲಿ ಸೆರೆ ಹಿಡಿದಿದ್ದಾನೆ. ಅಲ್ಲಿಗೂ ಎಷ್ಟೇ ಸವಿದರೂ ಸವಿಯದ ದೃಶ್ಯಾವಳಿಯಲ್ಲೂ ಮೀಯುತ್ತಾ ಕುಳಿತೇ ಹೊತ್ತು ಕಳೆಯುತ್ತಾನೆ… ಭೇಲ್ ಪುರಿ, ಐಸ್ ಕ್ರೀಮ್ ಗಳನ್ನು ತಿನ್ನುತ್ತಾ ನಲಿದು ನಡೆಯುತ್ತಲಿರುವ ಸುಂದರ ಜೋಡಿಗಳತ್ತ ದೃಷ್ಟಿ ಹರಿಸುತ್ತಾ, ಅಲ್ಲೆ ಚೆಂಡು ಬೆಲೂನುಗಳೋಂದಿಗೆ ಕುಣಿವ ಪುಟ್ಟ ಮಕ್ಕಳ ಆಟದಲ್ಲೆ ಕಣ್ಣನ್ನು ಕೀಲಿಸುತ್ತಾನೆ. ಮತ್ತೆ ಮತ್ತೆ ಬೇಡವೆಂದರೂ ವಿಶಾಲ ಸಮುದ್ರದ ರುಧ್ರ ಗಂಭೀರ ಮೌನದಲ್ಲಿ ಲೀನನಾಗಿ ಬಿಡುತ್ತಾನೆ. ಸೂರ್ಯಾಸ್ತಮಾನದವರೆಗೂ ಅವನಿಗೆ ಅಲ್ಲಿಂದ ಕದಲಲು ಮನಸ್ಸಾಗುವುದೆಂತು ! ಹಾಗೆ ನಸುಗತ್ತಲೆ ಕವಿಯುವವರೆಗೂ ಮುಂಬೈ ಮಹಾನಗರಕ್ಕೆ ಬೆನ್ನು ಹಾಕಿ ಕುಳಿತವನಿಗೆ ತನ್ನ ಹಿಂದೊಂದು ಜನನಿಬಿಡ ಮಹಾ ಜೀವಸಮುದ್ರವೇ ಆಗಿರುವ ಮುಂಬೈನ ನಿಷ್ಠೂರ ಬದುಕಿನ ಚಿತ್ರಣವೆಲ್ಲವೂ ತನ್ನ ಕುಂಚ ಹಾಗೂ ಕ್ಯಾಮೆರಾಗಳಿಗೆಟುಕಿಯೇ ಇಲ್ಲವೆಂಬ ಕಟು ಸತ್ಯವೂ ಹೊಳೆಯದೇ ಇರುವುದಿಲ್ಲ…..
ಬ್ಲಾಗಿಂಗ್
ಬ್ಲಾಗಿಂಗ್ ಎಂದರೆ ಅಂತರ್ಜಾಲದಲ್ಲಿ ವೈಯಕ್ತಿಕ ದಿನಚರಿ (ಆನ್ ಲೈನ್ ಪರ್ಸನಲ್ ಡೈರಿ) ಎಂದೇ ಪ್ರಚಲಿತದಲ್ಲಿದೆ. ಅಂದರೆ, ಯಾರುಬೇಕಾದರು ಏನನ್ನಾದರೂ ನಿರ್ಭಯ ನಿರ್ಭಿಢೆಯಿಂದ ಬರೆಯಬಹುದೆಂದೇ. ಹಾಗೆ ನೋಡಿದರೆ, ಅಂತರ್ಜಾಲದ ಬ್ಲಾಗಿಂಗ್ ತಾಣವೊಂದರಲ್ಲಿ ನೀವು ಸದಸ್ಯರಾಗಿ ಯಾರೆಲ್ಲರನ್ನೂ ನೀವು ತಲುಪಬಹುದಾದ, ನಿಮ್ಮ ಆಲೋಚನೆ-ಚಿಂತನೆಗಳಿಂದಲೇ ನಿಮ್ಮನ್ನು ಶ್ರೀಮಂತಗೊಳಿಸಬಹುದಾದ ಅತ್ಯಂತ ಪ್ರಭಾವೀ ಮಾಧ್ಯಮವಿದಾಗಿದೆ. ನೀವು ಬ್ಲಾಗಿಂಗ್ ಮಾಡುವ ಮುನ್ನ ಸ್ವಲ್ಪ ಮುಂದಾಲೋಚನಾಪರರರಾದರೆ, ಎಲ್ಲ ವರ್ಗದ ಜನರನ್ನೂ ವಯಸ್ಸಿನ ಬೇಧವಿಲ್ಲದೇನೆ ನಿಮ್ಮ ಓದುಗರನ್ನಾಗಿಸಿಕೊಳ್ಳಬಹುದಾಗಿದೆ. ಹೆಚ್ಚು ಹೆಚ್ಚು ಓದುಗರು ನಿಮ್ಮ ಬರಹಗಳಿಗೆ ಸ್ಪಂದಿಸಿದಂತೆಲ್ಲ ಅವರ ಅಭಿಮಾನಿಗಳಾಗುತ್ತಾರೆ;ಸ್ನೇಹವೂ ಲಭ್ಯವಾಗುತ್ತದೆ.
ಮುಂದೆ ಓದಿ…>>>
ಸ್ಥಿರ ಶೀರ್ಷಿಕೆಗಳು :-
ರೈಟರ್ ಟೈಮ್ಸ್ ನಲ್ಲಿ ಬರೆಯುವವರಿಗೆ- ಸಹಾಯ ಮತ್ತು ಸೂಚನೆಗಳು…>>>